ಪಿನ್-ಸ್ಟ್ರೈಪ್ಡ್ ಟಿಟ್-ಬ್ಯಾಬ್ಲರ್ ( ಮಿಕ್ಸರ್ನಿಸ್ ಗುಲಾರಿಸ್ ), ಇವನ್ನು ಹಳದಿ-ಎದೆಯ ಹರಟೆಮಲ್ಲ ಎಂದೂ ಕರೆಯುತ್ತಾರೆ, ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಓಲ್ಡ್ ವರ್ಲ್ಡ್ ಬಾಬ್ಲರ್ ಕುಟುಂಬ ಟಿಮಾಲಿಡೆಯಲ್ಲಿನ ಒಂದು ಜಾತಿಯ ಪಕ್ಷಿ. == ವ್ಯವಸ್ಥಾಶಾಸ್ತ್ರ ಮತ್ತು ವರ್ಗೀಕರಣಶಾಸ್ತ್ರ == ಹಳದಿ-ಎದೆಯ ಹರಟೆಮಲ್ಲ ಹಕ್ಕಿಯನ್ನು 1822 ರಲ್ಲಿ ಅಮೇರಿಕಾದ ನಿಸರ್ಗತಜ್ಞ ಥಾಮಸ್ ಹಾರ್ಸ್ಫೀಲ್ಡ್ ಅವರು ಸುಮಾತ್ರಾದಲ್ಲಿ ಸಂಗ್ರಹಿಸಿದ ಮಾದರಿಯನ್ನು ಆಧರಿಸಿ, ಟಿಮಾಲಿಯಾ ಗುಲಾರಿಸ್ ಎಂಬ ವೈಜ್ಞಾನಿಕ ಹೆಸರಿನಿಂದ ವಿಜ್ಞಾನಪ್ರಪಂಚಕ್ಕೆ ಪರಿಚಯಿಸಿದರು. ಹಳದಿ-ಎದೆಯ ಹರಟೆಮಲ್ಲ ಹಕ್ಕಿಗಳನ್ನು ಮೊದಲು ಮ್ಯಾಕ್ರೋನಸ್ ಕುಲದಲ್ಲಿ ಗುರುತಿಸಲಾಗಿತ್ತು ಆದರೆ 2019 ರಲ್ಲಿ ಪ್ರಕಟವಾದ ಆಣ್ವಿಕ ವಂಶೋತ್ಪತ್ತಿ ( ‌‌)ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ, ಇಂಗ್ಲೆಂಡಿನ ಪ್ರಾಣಿಶಾಸ್ತ್ರಜ್ಞ ಎಡ್ವರ್ಡ್ ಬ್ಲೈತ್ ರು 1842 ರಲ್ಲಿ ಮಿಕ್ಸರ್ನಿಸ್ ಕುಲಕ್ಕೆ ಸ್ಥಳಾಂತರಿಸಿದರು. ಕುಲದ ವೈಜ್ಞಾನಿಕ ಹೆಸರನ್ನು ಹೀಗೆ ಅರ್ಥೈಸಬಹುದು, ಪ್ರಾಚೀನ ಗ್ರೀಕ್ನ - ಮಿಕ್ಸಿಸ್ ಅಂದರೆ "ಮಿಶ್ರ" ಅಥವಾ "ಜೊತೆಯಾಗಿರುವುದು", ಮತ್ತು ಓರ್ನಿಸ್ ಅಂದರೆ "ಪಕ್ಷಿ" . ಹಕ್ಕಿಯ ನಿರ್ದಿಷ್ಟ ವಿಶೇಷಣ - ಗುಲಾರಿಸ್, ಆಧುನಿಕ ಲ್ಯಾಟಿನ್ ನಲ್ಲಿ "ಗಂಟಲು". ಹಳದಿ-ಎದೆಯ ಹರಟೆಮಲ್ಲ ಹಕ್ಕಿಗಳು ಡ್ಯುಮೆಟಿಯಾ ಮತ್ತು ಟಿಮಾಲಿಯಾ ಕುಲಗಳನ್ನು ಒಳಗೊಂಡಿರುವ ಗುಂಪಿಗೆ ಸೇರಿದೆ. ವಿಶಿಷ್ಟವಾದ ಬೋರ್ನಿಯ ಮತ್ತು ಜಾವಾದ ಜೀವಸಂದಣಿಯನ್ನು ನಿಗೆಲ್ ಕಾಲರ್ ನಡೆಸಿದ ರೂಪಶಾಸ್ತ್ರದ ಅಧ್ಯಯನದ ಆಧಾರದ ನಂತರ ಈ ಜಾತಿಗಳನ್ನು ಪ್ರತ್ಯೇಕಿಸಿ, ಬೋಲ್ಡ್-ಸ್ಟ್ರೈಪ್ಡ್ ಟಿಟ್-ಬ್ಯಾಬ್ಲರ್ ( ಮಿಕ್ಸಾರ್ನಿಸ್ ಬೋರ್ನೆನ್ಸಿಸ್ ) ಎಂದು ಮರುನಾಮಕರಣ ಮಾಡಲಾಗಿದೆ. ಈ ಹಕ್ಕಿಯ ಜೀವಸಂದಣಿಯಲ್ಲಿ, ಈವರೆಗೆ 13 ಉಪಜಾತಿಗಳನ್ನು ಗುರುತಿಸಲಾಗಿದ್ದು ಅವುಗಳ ನೆಲೆಯ ಪ್ರದೇಶ ಕೆಳಗಿನಂತಿವೆ: . . (, 1833) - ನೇಪಾಳ, ಭೂತಾನ್ ಮತ್ತು ಈಶಾನ್ಯ ಭಾರತದಿಂದ ಬಾಂಗ್ಲಾದೇಶ ಮತ್ತು ಪೂರ್ವ-ಮಧ್ಯ ಭಾರತ . . , 1940 - ಪಶ್ಚಿಮ ಮ್ಯಾನ್ಮಾರ್ . . (, 1900) - ಪೂರ್ವ ಮ್ಯಾನ್ಮಾರ್, ಪಶ್ಚಿಮ ಥೈಲ್ಯಾಂಡ್ ಮತ್ತು ನೈಋತ್ಯ ಯುನ್ನಾನ್ (ದಕ್ಷಿಣ ಚೀನಾ) . . , 1926 - ಆಗ್ನೇಯ ಯುನ್ನಾನ್ (ದಕ್ಷಿಣ ಚೀನಾ), ಉತ್ತರ, ಈಶಾನ್ಯ ಥೈಲ್ಯಾಂಡ್ ಮತ್ತು ಉತ್ತರ ಇಂಡೋಚೈನಾ . . & , 1924 - ಮಧ್ಯ ವಿಯೆಟ್ನಾಂ . . (, 1956) - ಪೂರ್ವ-ಮಧ್ಯ ಥೈಲ್ಯಾಂಡ್ ಮತ್ತು ಪಶ್ಚಿಮ ಕಾಂಬೋಡಿಯಾ . . , 1922 - ಪೂರ್ವ ಕಾಂಬೋಡಿಯಾ ಮತ್ತು ದಕ್ಷಿಣ ವಿಯೆಟ್ನಾಂ . . , 1921 - ಕಾನ್ ಸನ್ ದ್ವೀಪ (ದಕ್ಷಿಣ ವಿಯೆಟ್ನಾಂನಿಂದ) . . (, 1918) – ಟೆನಾಸ್ಸೆರಿಮ್ (ಆಗ್ನೇಯ ಮ್ಯಾನ್ಮಾರ್), ಥೈಲ್ಯಾಂಡ್‌ನ ಕರಾವಳಿ ಕೊಲ್ಲಿಯಿಂದ ಮಧ್ಯ ಮಲಯ ಪರ್ಯಾಯ ದ್ವೀಪಕ್ಕೆ ( ಚೆರ್ಸೋನೆಸೊಫಿಲಸ್ ಅನ್ನು ಒಳಗೊಂಡಿದೆ) . . , 1922 - ಮೆರ್ಗುಯಿ ದ್ವೀಪಸಮೂಹ (ನೈಋತ್ಯ ಮ್ಯಾನ್ಮಾರ್) . . , 1922 - ಆಗ್ನೇಯ ಥೈಲ್ಯಾಂಡ್ ಮತ್ತು ಕಾಂಬೋಡಿಯಾದ ಕರಾವಳಿ ದ್ವೀಪಗಳು . . (, 1822) - ದಕ್ಷಿಣ ಮಲಯ ಪೆನಿನ್ಸುಲಾ, ಸುಮಾತ್ರಾ, ಬನ್ಯಾಕ್ ದ್ವೀಪಗಳು (ಉತ್ತರ ಸುಮಾತ್ರದ ಪಶ್ಚಿಮ) ಮತ್ತು ಬಟು ದ್ವೀಪಗಳು (ಮಧ್ಯ ಸುಮಾತ್ರದ ಪಶ್ಚಿಮ) . . , 1877 - ಪಲವಾನ್ ಗುಂಪು (ನೈಋತ್ಯ ಫಿಲಿಪೈನ್ಸ್) == ವಿವರಣೆ == ಈ ಜಾತಿಯು ಹಳದಿ ಹುಬ್ಬು ಮತ್ತು ಕೆಂಗಂದು ಕಿರೀಟವನ್ನು ಹೊಂದಿದೆ. ಹಳದಿ ಬಣ್ಣದ ಗಂಟಲ ಮೇಲೆ ಕಂದು ಬಣ್ಣದ ಗೆರೆಗಳಿರುತ್ತವೆ. ಹಕ್ಕಿಯ ಧ್ವನಿ ಜೋರಾಗಿ ಪುನರಾವರ್ತಿತವಾದ ಚಾಂಕ್-ಚಾಂಕ್-ಚಾಂಕ್-ಚಾಂಕ್-ಚಾಂಕ್ ನಂತಿದ್ದು, ಸಿಂಪಿಗ (ಸಾಮಾನ್ಯ ಟೈಲರ್ ಬರ್ಡ್) ವನ್ನು ನೆನಪಿಸುತ್ತದೆ. ನೆಲಮಟ್ಟದ ಗಿಡ ಪೊದೆಗಳಲ್ಲಿ, ಸಣ್ಣ ಗುಂಪುಗಳಲ್ಲಿ ಆಹಾರವನ್ನರಸುತ್ತವೆ. ಫೆಬ್ರವರಿಯಿಂದ ಜುಲೈವರೆಗೆ ಪೂರ್ವಮುಂಗಾರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಹುಲ್ಲು ಮತ್ತು ಎಲೆಗಳಿಂದ ಮಾಡಿದ ಸಡಿಲವಾದ ಚೆಂಡಿನ ಆಕಾರದ ಗೂಡನ್ನು ನಿರ್ಮಿಸುತ್ತವೆ. == ಪ್ರಸರಣ == ಬಾಂಗ್ಲಾದೇಶ, ಭೂತಾನ್, ಬ್ರೂನಿಯೆ, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ನೇಪಾಳ, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ವ್ಯಾಪಕವಾಗಿ ಹರಡಿವೆ. ಭಾರತದಲ್ಲಿ, ಉತ್ತರ ಪೂರ್ವ ಘಟ್ಟ ಮತ್ತು ದಕ್ಷಿಣ ಭಾರತದಲ್ಲಿ ‍ (ಕೇವಲ ಕಬಿನಿ ಜಲಾಶಯ -ಮುದುಮಲೈನಲ್ಲಿ ಮಾತ್ರ) ವಿಂಗಡಿತ ಜೀವಸಂದಣಿ ದಾಖಲಾಗಿದೆ, ಈ ಎರಡು ಪ್ರದೇಶಗಳ ವಿಶಾಲ ಅಂತರದ ನಡುವೆ ಈ ಹಕ್ಕಿಗಳ ಸುಳಿವಿಲ್ಲ . 1939ರಲ್ಲಿ ಕಬಿನಿ ಜಲಾಯದ ಬಳಿ ಇರುವ ಅಂತರಸಂತೆಯಿಂದ ಸಲೀಂ ಅಲಿ ಈ ಹಕ್ಕಿಯನ್ನು ದಾಖಲಿಸಿದ್ದರು. ಈ ಆರಂಭಿಕ ಸಂಗ್ರಹಣೆಯ ನಂತರ ಇಲ್ಲಿಂದ ಮತ್ತೆ ಈ ಹರಟೆಮಲ್ಲ ಹಕ್ಕಿಗಳನ್ನು ಕಂಡ ಯಾವುದೇ ದಾಖಲೆಗಳಿಲ್ಲ. 2004 ರಲ್ಲಿ ಮುದುಮಲೈನ ಮಾಸಿನಗುಡಿ ಪ್ರದೇಶದಿಂದ ಮರುದಾಖಲಾತಿಯ ನಂತರ ಮತ್ತೆ ಕಾಣಿಸಿಕೊಂಡಿಲ್ಲ == ಉಲ್ಲೇಖಗಳು ==